ಮನೆಯಲ್ಲಿಯೇ ಸುರಕ್ಷಿತವಾಗಿರಿ
ಇಟಲಿ ದೇಶದ ಒಟ್ಟು ಜನಸಂಖ್ಯೆ 7 ರಿಂದ 8 ಕೋಟಿ. ಇಟಲಿ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಹೀಗಿದ್ರೂ ಕೊರೊನಾ ವೈರಸ್ ನಿಯಂತ್ರಿಸುವುದು ದೇಶದ ಕೈಮೀರಿ ಹೋಗಿದೆ. ಇಲ್ಲಿನ ಸ್ಥಿತಿ ಹೇಳ ತೀರದಂತಾಗಿದೆ. ಚೈನಾ ನಂತರ ಕೊರೊನಾ ಅತೀ ಹೆಚ್ಚಾಗಿ ಸಂಕಷ್ಟಕ್ಕೀಡು ಮಾಡಿರೋದು ಇಟಲಿಯನ್ನ. ಇದಕ್ಕೆ ಪ್ರಮುಖ ಕಾರಣ ಕೊರೊನಾ ಬಗೆಗಿನ ನಿರ್ಲಕ್ಷ್ಯ. ಅಲಕ್ಷ್ಯದಿಂದಾಗಿ ಇವತ್ತಿಗೂ ಕೊರೊನಾ ನಮ್ಮ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿಯೊಂದು ಆಸ್ಪತ್ರೆಗಳಲ್ಲಿ 30 ಬೆಡ್ಗಳಿಗೆ ಒಂದೊಂದು ವಾರ್ಡ್ಗಳನ್ನು ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ನಾನು ಒಂದು ವಾರ್ಡ್ನ ಮೇಲ್ವಿಚಾರಕ (Incharge) ಆಗಿದ್ದೇನೆ. ಪ್ರತಿನಿತ್ಯ ನನ್ನ ಕಣ್ಣ ಮುಂದೆಯೇ ಕೆಲವೇ ಗಂಟೆಗಳಲ್ಲಿ ಮೂರ್ನಾಲ್ಕು ಸಾವುಗಳಾಗ್ತಿವೆ.
ಕೊರೊನಾದಿಂದ ಮೃತಪಟ್ಟವರನ್ನ ಅವರ ಮನೆಯವರಿಗೆ ಹಸ್ತಾಂತರ ಮಾಡ್ತಿಲ್ಲ. ಸರ್ಕಾರವೇ ಅವರ ಅಂತಿಮ ವಿಧಿವಿಧಾನ ನೆರವೇರಿಸ್ತಿದೆ. ಮೃತಪಟ್ಟರನ್ನು ನೋಡಲು ಅವರ ರಕ್ತ ಸಂಬಂಧಿಗಳನ್ನ ಬಿಟ್ಟು ಬೇರೆ ಯಾರಿಗೂ ಅವಕಾಶವಿಲ್ಲ. ದೂರದಿಂದ ನಿಂತು ಅವರ ಮುಖ ನೋಡಬಹುದು. ಕೆಲವರು ಮೃತಪಟ್ಟವರ ಮುಖ ಕೂಡ ನೋಡಲು ಸಾಧ್ಯವಾಗಿಲ್ಲ. ಕೆಲವರ ಸಂಬಂಧಿಕರು ಬೇರೆ ದೇಶದಲ್ಲಿದ್ದು ಇಟಲಿಗೆ ಬರಲು ಸಾಧ್ಯವಾಗ್ತಿಲ್ಲ. ಸದ್ಯ ಇಟಲಿಯ ಪ್ರತಿಯೊಂದು ನಗರಗಳು ಲಾಕ್ ಡೌನ್ ಆಗಿವೆ. ಹೊರಗಡೆ ಯಾರೊಬ್ಬರೂ ಓಡಾಡುವಂತಿಲ್ಲ.
ಇದೀಗ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರೋದ್ರಿಂದ ಅವರನ್ನು ಎ, ಬಿ, ಸಿ ವರ್ಗಗಳಾಗಿ ಗುರುತಿಸಿ ಮನೆಯಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಕರೆಯನ್ನು ಸ್ವೀಕರಿಸಿ ಮನೆಗೆ ತೆರಳಿ ಚಿಕಿತ್ಸೆ ನೀಡಲಾಗ್ತಿದೆ. 80 ವರ್ಷ ಮೇಲ್ಪಟ್ಟವರಿಗೆ ಇಟಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡ್ತಿಲ್ಲ ಎಂಬ ವಿಷಯ ಸುಳ್ಳು. ಎಲ್ಲಾ ವಯೋಮಾನದವರಿಗೂ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡ್ತಿದ್ದೇವೆ. 30 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೀಡಾಗಿ ಆಸ್ಪತ್ರೆಗೆ ದಾಖಲಾದಾಗ ವೆಂಟಿಲೇಟರ್ ಸಮಸ್ಯೆಯಾದ್ರೆ, ಆಗ 80 ವರ್ಷ ಮೇಲ್ಪಟ್ಟವರಲ್ಲಿ ಯಾರು ಚಿಕಿತ್ಸೆಗೆ ಸ್ಪಂದಿಸ್ತಿಲ್ಲ ಅಂತಹವರ ವೆಂಟಿಲೇಟರ್ ಯುವಕರ ಚಿಕಿತ್ಸೆ ಮುಂದುವರೆಸಲು ಬಳಸ್ತಿದ್ದೇವೆ. ವೆಂಟಿಲೇಟರ್ ಅಳವಡಿಸಿದ್ರೂ ಚಿಕಿತ್ಸೆಗೆ ಸ್ಪಂದಿಸದವರಿಂದ ತೆಗೆದು ಈ ರೀತಿ ಮಾಡಲಾಗ್ತಿದೆ. ಹೇಗೂ ಅವರು ಬದುಕುಳಿಯಲ್ಲ ಎಂಬುದು ಖಚಿತವಾದಾಗ ಮಾತ್ರ ಅಂತಹವರ ವೆಂಟಿಲೇಟರ್ ಬೇರೊಬ್ಬರಿಗೆ ಅಳವಡಿಸಲಾಗ್ತಿದೆ. ಚೇತರಿಕೊಳ್ತಿರೋ ವೃದ್ಧರಿಗೆ ವೆಂಟಿಲೇಟರ್ನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ.
ಕೊರೊನಾಗೆ ಹೆದರಿ ಆಸ್ಪತ್ರೆ ಸಿಬ್ಬಂದಿಯೇ ದೀರ್ಘ ಕಾಲದ ರಜೆ ಪಡೆದಿದ್ದಾರೆ. ಇಟಲಿಯಲ್ಲಿನ ಕೊರೊನಾ ರೌದ್ರವತಾರಕ್ಕೆ ಹೆದರಿ ಹಿರಿಯ ನರ್ಸ್ ಗಳು ಕರ್ತವ್ಯಕ್ಕೆ ಹಾಜರಾಗ್ತಿಲ್ಲ. ಅನಾರೋಗ್ಯದ ನೆಪವೊಡ್ಡಿ ದೀರ್ಘಕಾಲದ ರಜೆ ಮೇಲೆ ತೆರಳಿದ್ದಾರೆ. ಸದ್ಯ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸ್ತಿರೋ ಬಹಳಷ್ಟು ಜನ ಹೊರದೇಶದಿಂದ ಬಂದು ಇಲ್ಲಿ ಕೆಲಸ ಮಾಡ್ತಿರುವವರು. ನಮಗೂ ಆತಂಕ ಇದೆ. ಆದ್ರೂ ನಮ್ಮ ಕೆಲಸಕ್ಕೆ ನಾವೂ ನ್ಯಾಯ ಒದಗಿಸಬೇಕು. ಬಹಳಷ್ಟು ಮೆಡಿಕಲ್ ಸ್ಟೂಡೆಂಟ್ ಗಳನ್ನು ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಲಾಗ್ತಿದೆ.
ಇಟಲಿ ಮಾಡಿದ ತಪ್ಪನ್ನು ಭಾರತ ಮಾಡಬಾರದು. ನಾನು ಒಬ್ಬ ಭಾರತೀಯನಾಗಿ ಕನ್ನಡಿಗನಾಗಿ ಹೇಳ್ತಿದ್ದೇನೆ. ಕೊರೊನಾ ವೈರಸ್ ವಿಷಯದಲ್ಲಿ ಯಾರಿಗೂ ನಿರ್ಲಕ್ಷ್ಯ ಬೇಡ. ಭಾರತ ಈ ಕ್ಷಣದಿಂದಲೇ ಸಂಪೂರ್ಣ ಲಾಕ್ ಡೌನ್ ಮಾಡಿದ್ರೆ ಉತ್ತಮ. ನಮ್ಮಲ್ಲಿ ಕಡಿಮೆ ಜನಸಂಖ್ಯೆ, ಉತ್ತಮ ಮೆಡಿಕಲ್ ಸೌಲಭ್ಯ ಇದ್ರೂ ನಮ್ಮಿಂದ ಏನೂ ಮಾಡಲು ಸಾಧ್ಯವಾಗ್ತಿಲ್ಲ. 130 ಕೋಟಿ ಜನಸಂಖ್ಯೆಯಿರುವ ಭಾರತವನ್ನು ನೆನಪಿಸಿಕೊಂಡರೆ ಭಯವಾಗುತ್ತೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಯಾರೂ ಮನೆಯಿಂದ ಹೊರಬರಬೇಡಿ. ಇಟಲಿಯ ಜನ ಮಾಡಿದಂತೆ ನೀವೂ ತಪ್ಪು ಮಾಡಬೇಡಿ. ಮನೆಯಲ್ಲಿರೋದೆ ನಿಮಗೆ ಸೇಫ್. ವಿದೇಶಗಳಿಂದ ಭಾರತಕ್ಕೆ ಹಿಂದಿರುಗಿದವರನ್ನು ಕಡ್ಡಾಯ 15 ದಿನಗಳ ಕಾಲ ಪ್ರತ್ಯೇಕವಾಗಿರಿಸಿ. ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
-ಹೇಮೆಗೌಡ
ಅಂದ್ಹಾಗೆ ಹೇಮೆಗೌಡ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ತುಮಕೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ 2007ರಲ್ಲಿ ಪದವಿ ಪೂರ್ಣಗೊಳಿಸಿದ್ರು. ಕಳೆದ 10 ವರ್ಷಗಳಿಂದ ಇಟಲಿಯಲ್ಲಿ ನೆಲೆಸಿದ್ದಾರೆ. ನರ್ಸ್ ಕೆಲಸದ ಜೊತೆ ಇಟಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿದ್ದಾರೆ. ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ವಾಪಸ್ಸಾಗ್ತಾರ
Comments
Post a Comment